ಟಾಟಾ ಆಲ್‌ಟ್ರೊಜ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ. ಟಾಟಾ ಆಲ್‌ಟ್ರೊಜ್ ಕಾರು ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುವ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾಗಿದೆ. ಹೊಸ ಆಲ್‌ಟ್ರೊಜ್ ಕಾರನ್ನು 2020ರ ಜನವರಿಯಲ್ಲಿ ಮಾರಾಟಕ್ಕೆ ಲಭ್ಯವಿರಲಿದ್ದು, ಹೊಸ ಕಾರು ಆಲ್ಫಾ ಪ್ಲಾಟ್‌ಫಾರಂ ಅಡಿ ಅಭಿವೃದ್ದಿಗೊಂಡಿದೆ.
ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಟಾಟಾ ಆಲ್‌ಟ್ರೊಜ್ ಕಾರಿನ ಫಸ್ಟ್ ಲುಕ್, ಕಾರಿನ ವಿನ್ಯಾಸ, ಫೀಚರ್ಸ್, ಸ್ಪೆಸಿಫಿಕೇಶನ್, ಮಾದರಿಗಳು, ಬಣ್ಣಗಳು ಹಾಗೂ ಇನ್ನಿತರ ವಿವರಗಳನ್ನು ಈ ವೀಡಿಯೊದಲ್ಲಿ ನೀಡಲಾಗಿದೆ.